`ರಾಗಿಣಿ ಐ ಪಿ ಎಸ್` ಚಿತ್ರಕ್ಕೆ ಉಪ್ಪಿ ಮಾತು
Posted date: 06 Sun, Oct 2013 – 03:13:05 PM

ನಿರ್ಮಾಪಕ ಕೆ ಮಂಜು ಅವರ ‘ರಾಗಿಣಿ ಐ ಪಿ ಎಸ್’ ಕನ್ನಡ ಚಿತ್ರದ ಚಿತ್ರೀಕರಣ ಪೂರ್ಣ ಆಗಿದ್ದು ನಾಯಕಿ ರಾಗಿಣಿ ಅವರು ಮೊದಲ ಬಾರಿಗೆ ಸಾಹಸಮಯ ಚಿತ್ರದಲ್ಲಿ ಐ ಪಿ ಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ತಿಳಿದಿರುವ ವಿಚಾರ. ಆದರೆ ಚಿತ್ರಕ್ಕೆ ಇದೀಗ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಹುಬ್ಬಳ್ಳಿ ಶೈಲಿಯ ಸಂಭಾಷಣೆಯಲ್ಲಿ ಚಿತ್ರಕ್ಕೆ ಒಪೆನಿಂಗ್ ಆಗಿ ಅವರ ಧ್ವನಿಯಲ್ಲಿ ಮಾತುಗಳನ್ನು ಜೋಡಿಸಿದ್ದಾರೆ.

ಹುಬ್ಬಳ್ಳಿಯ- ಧಾರವಾಡ ಹಿನ್ನಲೆಯಲ್ಲಿ ಇಡೀ ಚಿತ್ರವೂ ಇರುವುದರಿಂದ ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಪ್ರಸಿದ್ದಿಯನ್ನು, ಖ್ಯಾತ ನಾಮರನ್ನು, ಪ್ರೇಕ್ಷಣೀಯ ಸ್ಥಳಗಳನ್ನು, ವಿಧ್ಯಾ ಸಂಸ್ಥೆಗಳ, ವಾಣಿಜ್ಯ ನಗರಿಯ ಕುರಿತಾಗಿ ಸಿದ್ದಪಡಿಸಿರುವ ಸಂಭಾಷಣೆ ಹೇಳುವ ಉಪೇಂದ್ರ ಅವರು ಇಂತಹ ಜಾಗದಲ್ಲಿ ವ್ಯಾಗ್ರ ನೊಬ್ಬನಿದ್ದಾನೆ ಎಂದು ಎರಡರಿಂದ ಮೂರು ನಿಮಿಷಗಳ ಮಾತುಗಳನ್ನು ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.

ಆನಂದ್ ಪಿ ರಾಜು ಅವರ ನಿರ್ದೇಶನದಲ್ಲಿ ಗ್ಲಾಮರ್ ನಟಿ ಒಂದು ಕಟುವಾದ ಪೋಲೀಸು ಅಧಿಕಾರಿಯಾಗಿ ರಾಗಿಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಾಮಾಜಿಕ ಅಸಹ್ಯ, ಪಿಡುಗು ಹಾಗೂ ಇನ್ನಿತರಗಳನ್ನು ವಿಚಾರಗಳನ್ನು ಕಥಾ ಹಂದರದಲ್ಲಿ ಪೆರಿಸಲಾಗಿದೆ. ಅಂತಹ ಸ್ಥಿತಿಯಲ್ಲಿ ಪೋಲೀಸು ಅಧಿಕಾರಿ ತೆಗೆದುಕೊಳ್ಳುವ ನಿರ್ಣಯ ಏನು ಎಂದು ಸಹ ಚಿತ್ರ ಹೇಳುತ್ತದೆ.

ಕೆ ವಿ ರಾಜು ಅವರ ಹರಿತವಾದ ಸಂಭಾಷಣೆ ಇದೆ, ಯು ನಂದಕುಮಾರ್ ಅವರ ಛಾಯಾಗ್ರಹಣ, ಫರ್ಹಾನ್ ರೋಶನ್ (ಈ ಹಿಂದೆ ಎಮಿಲ್) ಅವರ ಸಂಗೀತ, ಕೌರವ ವೆಂಕಟೇಶ್, ಮಾಸ್ ಮಾಧ ಅವರ ಸಾಹಯ ದೃಶ್ಯಗಳಿವೆ, ಇಮ್ರಾನ್ ಸರ್ದಾರಿಯ ಅವರ ನೃತ್ಯ ನಿರ್ದೇಶನವಿದೆ, ರಾಜೇಶ್ ರಾಮನಾಥ್ ಅವರು ರೇ=ರೆಕಾರ್ಡಿಂಗ್ ಚಿತ್ರಕ್ಕಿದೆ.

ಹುಬ್ಬಳ್ಳಿ, ಧಾರವಾಡ ಸುತ್ತ ಮುತ್ತ ಚಿತ್ರೀಕರಣ ಮಾಡಿರುವ ‘ರಾಗಿಣಿ ಐ ಪಿ ಎಸ್’ ಚಿತ್ರದಲ್ಲಿ ಅವಿನಾಶ್, ನಾರಾಯಣ ಸ್ವಾಮಿ, ಪೆಟ್ರೋಲ್ ಪ್ರಸನ್ನ, ವೀಣ ಸುಂದರ್, ವಿವೇಕ್ ಪಂಡಿತ್, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಪೋಷಕ ವರ್ಗದಲ್ಲಿ ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed